‘ಲೂಸುಗಳು...ನಾವು ನೀವು’ ಎಂಬ ಚಿತ್ರ 23 ಹೊಸ ತಂತ್ರಜ್ಞ ರಿಂದ ಕೂಡಿದ ವಿಶೇಷ ಬಗೆಯ ಚಿತ್ರ ಆರಂಭದಿಂದಲೂ ಕೌತುಕವನ್ನು ಕಾಪಾಡಿಕೊಂಡು ಈಗ ಚಿತ್ರಮಂದಿರಕ್ಕೆ ಇದೆ ಶುಕ್ರವಾರ ಬರುತ್ತಿದೆ.
ಶ್ರದ್ದೆ, ಹೊಸ ಪ್ರಯತ್ನದೊಂದಿಗೆ ಮುನ್ನುಗುತ್ತಿರುವ ನವ ನಿರ್ದೇಶಕ ಅರುಣ್ ಅವರ ನೂತನ ಐಡಿಯಾ ಗಳೊಂದಿಗೆ ಇರುವ ‘ಲೂಸುಗಳು’ ಚಿತ್ರ ‘ಯು/ಎ’ಅರ್ಹತೆ ಪಡೆದ ಚಿತ್ರ.
ಬಿಡುಗಡೆಗೂ ಮುಂಚೆಯೇ ತಮಿಳು ಭಾಷೆಗೆ ರೀಮೇಕ್ ಹಕ್ಕುಗಳಿಗೆ ಕೇಳಲಾಗಿದೆ. ಧ್ವನಿ ಸುರಳಿ, ‘ಡಿಜಿಟಲ್ ಆಡಿಯೋ’ ಬಿಡುಗಡೆ ವ್ಯವಸ್ಥೆಯನ್ನು ನಿರ್ದೇಶಕ ಅರುಣ ಮೊದಲ ಪ್ರಯತ್ನದಲ್ಲೇ ಮಾಡಿದ್ದಾರೆ. 18 ಜಾಹೀರಾತು ಕಂಪನಿಗಳ ಜೊತೆ ಹಾಡುಗಳು ಹಾಗು ಸಿನೆಮಾದ ಪ್ರಚಾರಕ್ಕೆ ಮುಂದೆ ಬಂದಿದ್ದಾರೆ ನಿರ್ದೇಶಕ ಅರುಣ್ ಅವರು ತಮ್ಮ ಮೊದಲ ಪ್ರಯತ್ನದಲ್ಲಿ. ಐದು ಹಾಡುಗಳನ್ನು ನಿರ್ದೇಶಕ ಅನಿಲ್ ಕುಮಾರ್, ನಂದಿನಿ ಹೊಟೇಲ್ ಉದ್ಯೋಗಿ ರಾಘವೇಂದ್ರ, ಯೋಗಿ ದೇವಗಂಗ ಹಾಗೂ ಅರುಣ್ ಅವರುಗಳು ‘ಲೂಸುಗಳು’ ಚಿತ್ರಕ್ಕೆ ಸಾಹಿತ್ಯ ಒದಗಿಸಿದ್ದಾರೆ.
ಈ ಚಿತ್ರದಿಂದ ಕನ್ನಡ ಸಿನೆಮಕ್ಕೆ ಸಂಗೀತ ನಿರ್ದೇಶಕಿ ವಾಣಿ ಹರಿಕೃಷ್ಣ ಅವರು ಪರಿಚಯ ಆಗುತ್ತಿದ್ದಾರೆ. ಕೌಂಟೀ ಫಿಲ್ಮ್ ಮಕೇರ್ಸ್ ನಿರ್ಮಾಪಕ ಸಯ್ಯದ್ ಹುಸ್ಸೈನ್ ಹಾಗೂ ಕಾರ್ಯಕಾರಿ ನಿರ್ಮಾಪಕ ಬಸವರಾಜ್ ಮಂಚಯ್ಯ.
ಇದೆ ಮೊದಲಬಾರಿಗೆ ಹೆಸರಾಂತ ನಟಿ ರೇಖ ವೇದವ್ಯಾಸ್ ಅವರು ಐಟೆಮ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರೇಖ ಅವರ ಜೋಡಿ ಯಾಗಿ ಶ್ರೀ ಮುರಳಿ ಇದ್ದಾರೆ. ಶ್ರೀಕಿ ಜೊತೆ ಶ್ರಾವ್ಯ, ಅಕುಳ್ ಬಾಲಾಜಿ ಜೋಡಿಯಾಗಿ ಐಶ್ವರ್ಯ ನಾಗ್ ಅಭಿನಯಿಸಿದ್ದಾರೆ. ಶೋಬಿತ ರಾಯ್, ರವಿ ಚೇತನ್, ಪದ್ಮಜ ರಾವು, ಮಿಮಿಕ್ರಿ ದಯಾನಂದ, ರವಿ, ಹರೀಶ್, ವಿಜಯಸಾರತಿ ಅವರು ತರಗಣದಲ್ಲಿದ್ದಾರೆ.
ಚಿದಾನಂದ ಎಚ್. ಕೆ. ಅವರ ಛಾಯಾಗ್ರಹಣ ಹಾಗೂ ಅಕ್ಷಯ್ ಪಿ ರಾವು ಸಂಕಲನ ‘ಲೂಸುಗಳು’ ಚಿತ್ರಕ್ಕೆ ಮಾಡಿದ್ದಾರೆ.